- NOTIFICATION
- CENTRAL GOV’T JOBS
- STATE GOV’T JOBS
- ADMIT CARDS
- PRIVATE JOBS
- CURRENT AFFAIRS
- GENERAL KNOWLEDGE
- Current Affairs Mock Test
- GK Mock Test
- Kannada Mock Test
- History Mock Test
- Indian Constitution Mock Test
- Science Mock Test
- Geography Mock Test
- Computer Knowledge Mock Test
- INDIAN CONSTITUTION
- MENTAL ABILITY
- ENGLISH GRAMMER
- COMPUTER KNOWLDEGE
- QUESTION PAPERS
Information , prabandha in kannada
ಆಲ್ಬರ್ಟ್ ಐನ್ಸ್ಟೈನ್ ಜೀವನ ಚರಿತ್ರೆ । albert einstein in kannada.
Albert Einstein Information In Kannada , albert einstein in kannada, albert einstein quotes in kannada, albert einstein life story in kannada, albert einstein story in kannada
Albert Einstein Information In Kannada
ಆಲ್ಬರ್ಟ್ ಐನ್ಸ್ಟೈನ್ ಜೀವನ ಚರಿತ್ರೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
Albert Einstein In Kannada
ಆಲ್ಬರ್ಟ್ ಐನ್‌ಸ್ಟೈನ್ ಜರ್ಮನ್ ಮೂಲದ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದು, ಸಾರ್ವಕಾಲಿಕ ಶ್ರೇಷ್ಠ ಮತ್ತು ಅತ್ಯಂತ ಪ್ರಭಾವಶಾಲಿ ಭೌತವಿಜ್ಞಾನಿಗಳಲ್ಲಿ ಒಬ್ಬರು ಎಂದು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ಐನ್‌ಸ್ಟೈನ್ ಸಾಪೇಕ್ಷತಾ ಸಿದ್ಧಾಂತವನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾರೆ, ಆದರೆ ಅವರು ಕ್ವಾಂಟಮ್ ಮೆಕ್ಯಾನಿಕ್ಸ್ ಸಿದ್ಧಾಂತದ ಅಭಿವೃದ್ಧಿಗೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ.
ಅಲ್ಬರ್ಟ್ ಐನ್‍ಸ್ಟೈನ್ ಬಗ್ಗೆ ಮಾಹಿತಿ
ತಂದೆ :- ಹರ್ಮನ್ ಐನ್ಸ್ಟೈನ್ ತಾಯಿ :- ಪಾಲಿನ್ ಐನ್ಸ್ಟೈನ್ ಜೀವನ ಸಂಗಾತಿ :- Mileva Marić (1903 – 1919), ಎಲ್ಸಾ (1919 – 1936) ಪ್ರಶಸ್ತಿ :- ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (1921 ರಲ್ಲಿ) ಮಕ್ಕಳು:- ಹ್ಯಾನ್ಸ್ ಆಲ್ಬರ್ಟ್ ಐನ್ಸ್ಟೈನ್, ಎಡ್ವರ್ಡ್ ಐನ್ಸ್ಟೈನ್ ಮತ್ತು ಲೈಸರ್ಲ್ ಮಾರಿಕ್
ಐನ್‌ಸ್ಟೀನ್ ಅವರು ಅತೀ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು ಮಾತ್ರವಲ್ಲ, ನಿಜವಾದ ಮಾನವತಾವಾದಿಯೂ ಹೌದು. ವಿಜ್ಞಾನ ಮತ್ತು ಧರ್ಮ ಹಾಗೂ ಧರ್ಮಸಂಬಂಧಿ ವಿಷಯಗಳ ನಡುವೆ ವಾಗ್ವಾದಗಳು ಹುಟ್ಟಿಕೊಂಡಾಗಲೆಲ್ಲ, ಕಟ್ಟಾ ಧಾರ್ಮಿಕರು ಕೂಡ ವಿಜ್ಞಾನವು ಅಪರಿಪೂರ್ಣವೆಂಬ ತಮ್ಮ ನಿಲುವಿನ ಸಮರ್ಥನೆಗೆಂದು ಅವರ ಹೆಸರನ್ನು ಎಳೆದು ತರುತ್ತಾರೆ. ಅವರ ಹೇಳಿಕೆಗಳನ್ನು ಉದ್ಧರಿಸುವುದರ ಮೂಲಕ, ಅವರು ಆಳವಾದ ಧಾರ್ಮಿಕ ನಂಬಿಕೆಗಳಿದ್ದ ವ್ಯಕ್ತಿಯೆನ್ನುವುದನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ. ಹಾಗೆ, ಪದೇಪದೇ ಉದ್ಧರಿಸಲಾಗುವ ಒಂದು ಮಾತೆಂದರೆ ‘ಧರ್ಮವಿಲ್ಲದ ವಿಜ್ಞಾನ ಕುಂಟು ಮತ್ತು ವಿಜ್ಞಾನವಿಲ್ಲದ ಧರ್ಮ ಕುರುಡು’ ಎನ್ನುವುದು.
ಆಲ್ಬರ್ಟ್ ಐನ್ಸ್ಟೈನ್ ಜೀವನ ಚರಿತ್ರೆ
ಆದರೆ ಧರ್ಮ ಎಂದರೇನು? ಐನ್ ಸ್ಟೀನ್ ಪುಕಾರ ಧರ್ಮದ ಪರಿಕಲ್ಪನೆ ಯಾವ ರೀತಿಯದು? ನಮಗೆ ಈ ವಿಷಯಗಳ ತಿಳಿವಳಿಕೆ ಅಗತ್ಯವಾದುದು. ಏಕೆಂದರೆ ಧರ್ಮವನ್ನು ಕುರಿತ ಹಲವು ನಿರ್ವಚನಗಳಿವೆ. ಅಷ್ಟೇ ಅಲ್ಲ, ಧರ್ಮದ ಬಗ್ಗೆ ಪರಸ್ಪರ ವಿಭಿನ್ನವಾದ ಸಿದ್ಧಾಂತಗಳೂ ಇವೆ. ನಮಗೆ ತಿಳಿದಿರುವಂತೆ ಎಲ್ಲ ಸಾಂಪುದಾಯಿಕವಾದ ಧರ್ಮಗಳ ಕೇಂದ್ರದಲ್ಲಿ ದೇವರ ಪರಿಕಲ್ಪನೆಯಿದೆ. ದೇವರು ಅದರ ಮುಂದುವರಿಕೆಯಾಗಿ ಧರ್ಮವನ್ನು ಕುರಿತಂತೆ ಐನ್‌ಸ್ಟೀನ್ ಅವರ ವಿಚಾರಗಳು ಈ ಹೇಳಿಕೆಯಿಂದ ಸ್ಪಷ್ಟವಾಗುತ್ತವೆ. “ಕೆಟ್ಟದ್ದಕ್ಕೆ ಶಿಕ್ಷೆ ಕೊಟ್ಟು, ಒ ಪ್ರತಿಫಲ ನೀಡುವ ಮತಧರ್ಮ ಶಾಸ್ತ್ರಗಳ ದೇವರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಜಗತ್ತಿನಲ್ಲಿರುವ ಎಲ್ಲ ವಸ್ತುಗಳ ಕ್ರಮಬದ್ಧ ಸಂಯೋಜನೆ ಹಾಗೂ ಸಮನ್ವಯಗಳ ಮೂಲಕವೇ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ‘ಸ್ಪಿನೋಜಾ’ನ ದೇವರನ್ನು ನಂಬುತೇನೆ. ಮನುಷ್ಯ ಜೀವಿಗಳ ವರ್ತನೆ ಹಾಗೂ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ದೇವರನ್ನು ನಾನು ನಂಬುವುದಿಲ್ಲ.” ಸ್ಪಿನೋಜಾ ಒಬ್ಬ ಡಚ್ ತತ್ವಜ್ಞಾನಿ, ದೇವರು ಮತ್ತು ಧರ್ಮಕ್ಕೆ ಸಂಬಂಧಿಸಿದಂತೆ ಅವನ ಅಸಾಂಪ್ರದಾಯಿಕ ದೃಷ್ಟಿಕೋನಕ್ಕಾಗಿ ಆಮಸ್ಮರ್‌ಡಂನ ಸಿನಗಾಗ್‌ರವರು ಅವನಿಗೆ ಹಿಂಸೆ ಕೊಟ್ಟು ಅವನನ್ನು ಮತದಿಂದ ಹೊರಹಾಕಿದ್ದರು. ಜೀವಮಾನ ಪರ್ಯಂತ ಅವನನ್ನು ಪೀಡಿಸಿದರು. ಐನ್‌ಸ್ಟೀನ್ ಅವರ
albert einstein biography in kannada
ಮೇಲಿನ ಹೇಳಿಕೆಯಿಂದ ಅವರ ಕಲ್ಪನೆಯ ದೇವರಿಗೂ ಮನುಷ್ಯನ ವ್ಯವಹಾರಗಳಿಗೂ ಯಾವುದೇ ಸಂಬಂಧವಿಲ್ಲವೆಂಬ ಸಂಗತಿಯು ಸ್ಪಷ್ಟವಾಗಿ ಮನದಟ್ಟಾಗುತ್ತದೆ. ಅವರ ಪುಕಾರ ಧರ್ಮವು ಯಾವುದೇ ದೈವೀ ಅಧಿಕಾರವನ್ನು ಅವಲಂಬಿಸದೆ ಸಂಪೂರ್ಣವಾಗಿ ನೈತಿಕವಾಗಿತ್ತು. ಸಹಜವಾಗಿಯೇ ಈ ಮಾತುಗಳು ಬಹಳ ಮುಖ್ಯವಾದವು. ದೇವರನ್ನು ಒಂದೇ ಸಮನೆ ತಮ್ಮ ವಾಣಿಜ್ಯ ವ್ಯವಹಾರಗಳಿಗೆ ಬಳಸುತ್ತಾ ಬಂದಿರುವ ಜನರಿಗೆ ಐನ್‌ಸ್ಟೀನ್‌ರ ಹೆಸರೆತ್ತುವ ಯಾವ ಅಧಿಕಾರವೂ ಇಲ್ಲ, ದೇವರ, ಧರ್ಮಗಳನ್ನು ಕುರಿತು ತಮ್ಮ ಒರಟು ಒರಟಾದ, ಅಪಾಯಕಾರಿ ಸಿದ್ಧಾಂತಗಳ ಸಮರ್ಥನೆಗೆ, ಆ ಮಹಾವಿಜ್ಞಾನಿಯ ಹೆಸರನ್ನು ಉಪಯೋಗಿಸಿಕೊಳ್ಳುವುದು ಅನ್ಯಾಯವೂ ಹೌದು.. ಐನ್‌ಸ್ಟೀನ್ ರ ಬದುಕನ್ನು ರೂಪಿಸಿದ ಎರಡು ಹೇಳಿಕೆಗಳು ಹೀಗಿವೆ: ನಾನು ಈ ಪತ್ರವನ್ನು ಐನ್‌ಸ್ಟೀನ್‌ರ ಬದುಕನ್ನು ರೂಪಿಸಿದ ಎರಡು ಹೇಳಿಕೆಗಳ ಮೂಲಕ ಮುಗಿಸಿದರೆ ಅನುಚಿತವಾಗಲಾರದೆಂದು ತಿಳಿಯುತ್ತೇನೆ.
“ಸಾಮಾನ್ಯ ಮನುಷ್ಯರು ಸಾಧಿಸ ಬಯಸುವ ಆದರ್ಶಗಳಾದ ಆಸ್ತಿಪಾಸ್ತಿ, ಸುಖಭೋಗ ಮತ್ತು ಬಹಿರಂಗದ ಯಶಸ್ಸುಗಳು ಮೊದಲಿನಿಂದಲೂ ಬಹಳ ತುಚ್ಚವೆಂದು ನನಗೆ ತೋರಿದೆ.” “ಯಶಸ್ಸನ್ನು ಸಂಪಾದಿಸಿದ ಮನುಷ್ಯನಾಗಲು ಪ್ರಯತ್ನಿಸಬೇಡ, ಮೌಲ್ಯಗಳಿಗೆ ಬೆಲೆಕೊಡುವ ಮನುಷ್ಯನಾಗು.” ಆಳವಾದ ಒಳನೋಟಗಳನ್ನು ನೀಡುವ ಈ ಹೇಳಿಕೆಗಳು ಸಾಮಾನ್ಯವಾಗಿ ಎಲ್‌ಲ ಮನುಷ್ಯರಿಗೆ ಅದರಲ್ಲೂ ವಿಶೇಷವಾಗಿ ನಮ್ಮ ರಾಜಕಾರಣಿಗಳಿಗೆ ಬಹಳ ಮುಖ್ಯವೆಂದು ಲೇಖಕ, ವಿಚಾರವಾದಿ ಎಚ್. ನರಸಿಂಹಯ್ಯನವರು ಬರೆಯುತ್ತಾರೆ.
ಅಂಬಿಗರ ಚೌಡಯ್ಯ ಅವರ ಜೀವನ ಚರಿತ್ರೆ
ಅಂಬಿಗರ ಚೌಡಯ್ಯ : ಶಿವಶರಣ ಅಂಬಿಗರ ಚೌಡಯ್ಯ ಅವರು ಕ್ರಿ.ಶ. ಸುಮಾರು 12ನೆಯ ಶತಮಾನದ ಪ್ರಸಿದ್ಧ ವಚನಕಾರರು ಮತ್ತು ಸಮಾಜ ಸುಧಾರಕರು.
ಇವರು ಗುತ್ತಲರ ಅರಸರ ಆಳ್ವಿಕೆ ಕಾಲದಲ್ಲಿ ಚೌಡದಾನಪುರದ ತುಂಗಭದ ನದಿ ತೀರದಲ್ಲಿ ತನ್ನ ದೋಣಿಯ ಮೂಲಕ ಜನರನ್ನು ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದರು.
ಸಮಾಜ ಚಿಂತನೆಯ ಮೂಲಕ ಜನತೆಯ ಒಳಿತನ್ನು ಬಯಸಿದ ವಚನಗಳನ್ನು ರಚಿಸುವುದರ ಮೂಲಕ ಕನ್ನಡ ಮುಂದೆ ಓದಿ …
ಜೇಡರ ದಾಸಿಮಯ್ಯ ಅವರ ಜೀವನ ಚರಿತ್ರೆ
ವಚನ ಸಾಹಿತ್ಯದ ಪ್ರವರ್ತಕ ದೇವರ ದಾಸಿಮಯ್ಯ ಅಥವಾ ಜೇಡರ ದಾಸಿಮಯ್ಯ ಅವರು ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದಲ್ಲಿ ಕಾಮಯ್ಯ ಮತ್ತು ಶಂಕರಿಗೆ ಜನಿಸಿದರು . ದೇವಾಂಗ ಸಮುದಾಯವು ಅವನನ್ನು ದೇವಾಂಗ ಗಣೇಶ್ವರನ ಅವತಾರ ಪುರುಷ ಎಂದು ಪರಿಗಣಿಸುತ್ತದೆ. ಮುಂದೆ ಓದಿ …
ಕನಕ ದಾಸ ಅವರ ಜೀವನ ಚರಿತ್ರೆ
ಶ್ರೀ ಕನಕದಾಸರುಮೂಲ ಹೆಸರು -ತಿಮ್ಮಪ್ಪನಾಯಕ ಕರ್ನಾಟಕದಲ್ಲಿ 15-16 ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಮುಂದೆ ಓದಿ
Albert Einstein Information In Kannada ESSAY
ಆಲ್ಬರ್ಟ್ ಐನ್ಸ್ಟೈನ್ ತಂದೆಯ ಹೆಸರು
ಹರ್ಮನ್ ಐನ್ಸ್ಟೈನ್
ಆಲ್ಬರ್ಟ್ ಐನ್ಸ್ಟೈನ್ ಗೆ ದೊರೆತ ಪ್ರಶಸ್ತಿಗಳು
ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (1921 ರಲ್ಲಿ)
ಇತರೆ ಪ್ರಬಂಧಗಳನ್ನು ಓದಿ
- ಜಾಕಿರ್ ಹುಸೇನ್ ಜೀವನ ಚರಿತ್ರೆ
- ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಕನ್ನಡ
- ಬಸವಣ್ಣನವರ ಜೀವನ ಚರಿತ್ರೆ ಕನ್ನಡ
- ಕೆ ಪಿ ಪೂರ್ಣಚಂದ್ರ ತೇಜಸ್ವಿ ಜೀವನ ಚರಿತ್ರೆ
- ಅಂಬೇಡ್ಕರ್ ಬಗ್ಗೆ ಮಾಹಿತಿ
- ಮದರ್ ತೆರೇಸಾ ಮಾಹಿತಿ
- ಮಾಲಿನ್ಯದ ಕುರಿತು ಪ್ರಬಂಧ
- ವಿನಾಯಕ ದಾಮೋದರ ಸಾವರ್ಕರ್
Leave a Reply Cancel reply
Your email address will not be published. Required fields are marked *
Save my name, email, and website in this browser for the next time I comment.
- Privacy Policy
- Terms and Conditions
# Trending Searches
- #ದರ್ಶನ್ ಕೇಸ್
- #ಬೆಂಗಳೂರು ಸುದ್ದಿ
- #ಸಿಎಂ ಸಿದ್ದರಾಮಯ್ಯ
- #ಬಿಗ್ಬಾಸ್ಕನ್ನಡ
- ತಾಜಾ ಸುದ್ದಿ
- ಬೆಂಗಳೂರು ಗ್ರಾಮಾಂತರ
- ಬೀದರ್​
- ಚಿಕ್ಕಬಳ್ಳಾಪುರ
- ಚಿಕ್ಕಮಗಳೂರು
- ದಕ್ಷಿಣ ಕನ್ನಡ
- ಉತ್ತರ ಕನ್ನಡ
- ಸ್ಯಾಂಡಲ್​ವುಡ್
- ಸಿನಿ ವಿಮರ್ಶೆ
- ಇತರೇ ಕ್ರೀಡೆ
- ಚುನಾವಣೆ 2024
- ಫೋಟೋ ಗ್ಯಾಲರಿ
- ವೈರಲ್​
- ಆಟೋಮೊಬೈಲ್​
- ಷೇರು ಮಾರುಕಟ್ಟೆ
- Kannada News World Details about Physicist Albert Einstein and him interesting facts in kannada
ಆಲ್ಬರ್ಟ್ ಐನ್ಸ್ಟೈನ್ ಬಗ್ಗೆ ನಿಮಗೆಷ್ಟು ಗೊತ್ತು? ಅವರ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ
Albert einstein birth anniversary: ಕ್ವಾಂಟಮ್ ಮೆಕ್ಯಾನಿಕ್ಸ್, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಮತ್ತು ವಿಶ್ವಶಾಸ್ತ್ರಕ್ಕೆ ಇವರ ಕೊಡುಗೆ ಅಪಾರ. 1921ರಲ್ಲಿ ಇವರ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ..
Updated on: Mar 14, 2022 | 11:27 AM
ಸಾರ್ವಕಾಲಿಕ ಶ್ರೇಷ್ಠ ಭೌತಶಾಸ್ತ್ರಜ್ಞರಲ್ಲಿ ಒಬ್ಬರಾದ ಆಲ್ಬರ್ಟ್ ಐನ್‍ಸ್ಟೈನ್ (Albert Einstein) ಮಾರ್ಚ್ 14, 1879 ರಂದು ಜರ್ಮನಿಯಲ್ಲಿ ಜನಿಸಿದರು. ಅವರು ಸಾಪೇಕ್ಷತಾ ಸಿದ್ಧಾಂತವನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು. ಕ್ವಾಂಟಮ್ ಮೆಕ್ಯಾನಿಕ್ಸ್, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಮತ್ತು ವಿಶ್ವಶಾಸ್ತ್ರಕ್ಕೆ ಇವರ ಕೊಡುಗೆ ಅಪಾರ. 1921ರಲ್ಲಿ ಇವರ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇಸಾಕ್ ನ್ಯೂಟನ್ನ ಸಿದ್ಧಾಂತವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಭೌತಶಾಸ್ತ್ರ (Physics) ಸಂಶೋಧನೆಯಲ್ಲಿ ಮಹತ್ವದ ಮೈಲುಗಲ್ಲುಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
- ಆಲ್ಬರ್ಟ್ ಐನ್‍ಸ್ಟೈನ್ ಅವರ ಆಸಕ್ತಿದಾಯಕ ಸಂಗತಿಗಳು:
- ಜರ್ಮನಿಯ ವುಟೆನ್ ಬರ್ಗ್ನ ಉಲ್ಮ್ ಎಂಬ ಹಳ್ಳಿಯಲ್ಲಿ ಐನ್‍ಸ್ಟೈನ್ ಜನಿಸಿದರು. ಇವರ ತಂದೆ ಹೆಸರು ಹರ್ಮನ್ ಐನ್ಸ್ಟೈನ್. ತಾಯಿ ಹೆಸರು ಪೌಲಿನ್ ಐನ್‍ಸ್ಟೈನ್.
- 1903ರಲ್ಲಿ ಜರ್ಮನ್ ಹುಡುಗಿ ಮಿಲೆವಾ ಮ್ಯಾರಿಕ್ ಜೊತೆ ಐನ್‍ಸ್ಟೈನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಹಾನ್ಸ್ ಮತ್ತು ಎಡ್ವರ್ಡ್ ಎಂಬ ಎರಡು ಮಕ್ಕಳು ಜನಿಸಿದರು. ಮೊದಲ ಪತ್ನಿಗೆ ವಿಚ್ಛೇದನ ನೀಡಿ ನಂತರ 1919ರಲ್ಲಿ ಎಲ್ಯಾ ಲೊವೆಂಥಾಲ್ ಎಂಬ ಮಹಿಳೆಯ ಜೊತೆ ಮರು ಮದುವೆಯಾದರು.
- ಆಲ್ಬರ್ಟ್ ಐನ್‍ಸ್ಟೈನ್ ಜರ್ಮನಿಯಲ್ಲಿ ಜನಿಸಿದರೂ, ಅವರು ಈ ದೇಶದಲ್ಲಿ ಹೆಚ್ಚು ಸಮಯ ವಾಸಿಸಲಿಲ್ಲ. ಇಟಲಿ, ಸ್ವಿಜರ್ಲ್ಯಾಂಡ್ ಮತ್ತು ಜೆಕಿಯಾದಲ್ಲಿ ಉಳಿದುಕೊಂಡರು. ಯುನೈಟೆಡ್ ಸ್ಟೇಟ್ಗೆ ತೆರಳಿದ ನಂತರ, ಆಲ್ಬರ್ಟ್ ಐನ್‍ಸ್ಟೈನ್ ಮತ್ತೆ ಜರ್ಮನಿಯತ್ತ ಮುಖ ಮಾಡಲಿಲ್ಲ.
- ಆಲ್ಬರ್ಟ್ ಐನ್‌ಸ್ಟೈನ್ ತನ್ನ ಮೊದಲ ಪತ್ರಿಕೆಯನ್ನು 16 ನೇ ವಯಸ್ಸಿನಲ್ಲಿ ಬರೆದರು.
- ಆಲ್ಬರ್ಟ್ ಐನ್‌ಸ್ಟೈನ್ ಅವರು 15ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದರು. ಶಾಲೆಗೆ ಹೆಚ್ಚು ಕಾಲ ಹೋಗದೇ ಇದ್ದರೂ ಅವರು ಗಣಿತ, ಭೌತಶಾಸ್ತ್ರ, ತತ್ವಶಾಸ್ತ್ರದಲ್ಲಿ ಗಮನಾರ್ಹವಾದ ಸಾಧನೆ ಮಾಡಿದ್ದಾರೆ.
- ಮೊದಲಿಗೆ ಆಲ್ಬರ್ಟ್ ಐನ್‌ಸ್ಟೈನ್ ವಿದ್ಯಾರ್ಥಿಗಳಿಗೆ ಗಣಿತ ಮತ್ತು ಭೌತಶಾಸ್ತ್ರ ಹೇಳಿಕೊಡುತ್ತಿದ್ದರು. ತಮ್ಮ ಕೈಯಲ್ಲಿ ಕೆಲಸ ಇಲ್ಲದಿದ್ದಾಗ ಪಿಎಚ್ಡಿ ಮುಂದುವರಿಸುತ್ತಾರೆ.
- ಉಪಾಧ್ಯರ ವೃತ್ತಿಗೆ ಅರ್ಜಿಹಾಕಿ 2 ವರ್ಷ ಅಲೆಯುತ್ತಾರೆ. ನೌಕರಿ ಸಿಗುವುದು ಕಠಿಣವಾಗಿತ್ತು. ಕೊನೆಗೆ ಬರ್ನ್ ನಗರದ ಪೇಟೆಂಟ್ ಆಫೀಸ್ನಲ್ಲಿ ಕೆಲಸ ಸಿಕ್ಕಿತು.
ಬೆಂಕಿಯಿಂದ ಪಾರಾಗಲು ಮೂರು ವರ್ಷದ ಮಗುವನ್ನು ಕಟ್ಟಡದಿಂದ ಕೆಳಗೆ ಎಸೆದ ತಂದೆ; ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ
Virat Kohli: ಪಂದ್ಯದ ನಡುವೆ 3 ಕಡೆಗಳಿಂದ ಕೊಹ್ಲಿ ಬಳಿ ಏಕಾಏಕಿ ಮೈದಾನಕ್ಕೆ ನುಗ್ಗಿದ ಗುಂಪು: ವಿಡಿಯೋ
Published On - 11:24 am, Mon, 14 March 22
IMAGES
VIDEO